Posts

Showing posts from October, 2017
#ಸ್ವಾತಂತ್ರಹೋರಾಟಗಾರ ಮತ್ತು ಸಮಾಜ ಸೇವಕ :-  ಕೆ.ಪಿ.ವೀರಪ್ಪ     ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ದಿವಂಗತ ಕೆ ಪಂಪಣ್ಣ ಮತ್ತು ಹಂಪಮ್ಮ ದಂಪತಿಗಳ ಮೊದಲ ಮಗನಾಗಿ ಜನಿಸಿದ ಕೆ ಪಿ ವೀರಪ್ಪ 99ರ ಇಳಿವಯಸ್ಸಿನಲ್ಲಿ ಆಸರೆ ಇಲ್ಲದೆ ಸಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದರ ಜೊತೆಗೆ ತನ್ನ ಕುಟುಂಬವನ್ನು ಪೋಷಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕಾದ ಸತ್ಯ ವಿಚಾರ ಇದಾಗಿದೆ.      ತೆಕ್ಕಲಕೋಟೆಯ ಕೆ ಪಿ ವೀರಪ್ಪನವರಿಗೆ 9 ಜನ ಮಕ್ಕಳು ಅದರಲ್ಲಿ ಆರು ಜನ ಗಂಡುಮಕ್ಕಳು ಉಳಿದಂತೆ ಮೂರು ಜನ ಹೆಣ್ಣು ಮಕ್ಕಳು ಇಂತಹ ದೊಡ್ಡ ಕುಟುಂಬದ ಪೋಷಣೆಯಲ್ಲಿ ಕೆ.ಪಿ.ವೀರಪ್ಪ ಸಮಾಜದಲ್ಲಿ ಸಭ್ಯನಾಗರಿಕನಾಗಿ ಬದುಕಿ ಬಾಳುತ್ತಾ ಬಂದಿರುವುದು ಕೆ.ಪಿ.ವೀರಪ್ಪನವರ ದೃಡ ಸಂಕಲ್ಪ ಗಳ ಸ್ವಾವಲಂಬಿ ಬದುಕಿನ ಕಾಯಕವೇ ಕೈಲಾಸ ಎಂಬ ಸರ್ವಜ್ಞರ ನಾಣ್ಣುಡಿಯಂತೆ ತೆಕ್ಕಲಕೋಟೆ ಗೆ ಅಂದಿನ ದಿನಗಳಲ್ಲಿ ಇದ್ದ ಒಂದೇ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಅಂದಿನಿಂದ ಇಂದಿಗೂ ಪ್ರಾಮಾಣಿಕವಾಗಿ ಜನಗಳಿಗೆ ಪಡಿತರ ಧಾನ್ಯವನ್ನು ತಾನೇ ಸ್ವಯಂ ವಿತರಿಸುತ್ತ ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿ ಮತ್ತು ವೀರಪ್ಪನವರ ಬಗ್ಗೆ ಗೌರವಗಳು ಮೂಡುವಂತೆ ಕಳೆದ ಐವತ್ತು ಅರವತ್ತು ವರ್ಷಗಳಿಂದ ನಿರಂತರ ಶ್ರಮ ಜೀವಿಯಾಗಿ ಬದುಕಿನ ಜಟಕಾ ಬಂಡಿಯನ್ನು ಎಳೆಯುತ್ತಾ ಎಂದೂ ಬೇಸರಪಡದೆ ಸದಾ ಹುಮ್ಮಸ್ಸಿನಿಂದ 99ರ ವಯಸ್ಸಿನಲ್ಲೂ ಕಾಯಕ ಮಾಡುತ್ತಿರುವ ಕಾಯಕ ಯೋಗಿ ಕೆ ಪಿ ವೀರಪ್ಪನವರು