Posts

Showing posts with the label Lingasguru

ಮುದುಗಲ್ ಕೋಟೆಯತ್ತ ಒಂದು ಚಿತ್ತ

Image
  ಮುದುಗಲ್ಲ ಕೋಟೆ:            ರಾ ಯಚೂರು ಜಿಲ್ಲೆಯ ಮಸ್ಕಿಯಿಂದ ಸುಮಾರು 28 ಕಿ.ಮೀ ಅಂತರದಲ್ಲಿ ಮುದುಗಲ್ಲ ಎಂಬ ಪಟ್ಟಣವಿದೆ. ಪಟ್ಟದಲ್ಲಿನ ಪ್ರಮುಖ ಐತಿಹಾಸಿಕ ಹೆಜ್ಹೆಗುರುತೆಂದರೆ ಅದುವೇ ಬೃಹತ್ ಕೋಟೆ. ಕೋಟೆಯು ತುಂಬಾ ವಿಶಾಲವಾಗಿದ್ದು ಊರು ಸಮೀಪಿಸುತ್ತಲೇ ಕಣ್ಮನಸೆಳೆಯುವಂತಹ ಮನಮೋಹಕ ದೃಶ್ಯವು ಗೋಚರಿಸುತ್ತದೆ. ಅಂತಹ ದೃಶ್ಯ ಮತ್ತೇನಲ್ಲಾ ಅದುವೇ ಕಡುಗಲ್ಲುಗಳ ಮೇಲೆ ಸುಂದರವಾಗಿ ನಿರ್ಮಿಸಿದ ಕೋಟೆಯ ಶೈಲಿ. ಪದ್ಮಾವತ್ ಚಲನಚಿತ್ರ ನೋಡುವಾಗ ಕೋಟೆಯ ಚಿತ್ರಣಗಳು ಹೇಗಿದ್ದವೋ ಹಾಗೇ ನೋಡನೋಡುತ್ತಲೇ ಎಲ್ಲೋ ಒಂದೆಡೆ ಖುಷಿ ಅಂತೆಯೇ ಇದೆಯಲ್ಲವೆಂದು. ಕುತೂಹಲ ಹೆಚ್ಚಿತು ಹೇಗಾದರೂ ಸವಿಯಲೇಬೇಕೆಂದು ಕೋಟೆಯ ಬಳಿ ಹೋದೆವು. ಅಂದ ಹಾಗೇ ಹೇಳೋದು ಬಿಟ್ಟೆ ನನ್ನ ಜೊತೆ ಸ್ನೇಹಿತ ಚನ್ನಬಸವ ಅವರು ಕೂಡಾ ಬಂದಿದ್ದರು. ಆಯ್ತು ಈಗ ನಾವು ಕೋಟೆಯ ಬಳಿ ಬರುತ್ತಿದ್ದಂತೆಯೇ ಸುತ್ತಲೂ ಜಲದುರ್ಗವನ್ನ ಒಳಗೊಂಡಿರುವುದು ಇನ್ನೂ ಕುತೂಹಲವನ್ನ ಕೆರಳಿಸಿತು ಆದರೆ ಇಲ್ಲಿ ಬೇಸರದ ವಿಷಯವೇನೆಂದರೆ ಆ ಜಲವು ಸಂಪೂರ್ಣ ಚರಂಡಿ ಮತ್ತು ತ್ಯಾಜ್ಯ ನೀರಿನಂದಲೇ ಕೂಡಿತ್ತು. ಇರ್ಲಿ ಈಗ ಇವೆಲ್ಲಾ ಹೇಳ್ತಾ ಹೋದ್ರೆ ಪ್ರತಿಯೊಂದು ಊರಲ್ಲಿ ಇದೇ ತರನೇ ಇರ್ತವೆ. ಸರಿ ಮುಂದೆ ಪ್ರವೇಶ ದ್ವಾರದ ಬಳಿ ನಿಂತುಕೊಂಡು ನೋಡ್ತಿರುವಾಗ  ತುಂಬಾ ರೋಮಾಂಚನ ಅನುಭವ. ಆ ಶೈಲಿ, ಕಲ್ಲುಗಳ ಬಳಕೆ ಇವೆಲ್ಲಾ ಆಗಿನ ದಿನಗಳನ್ನ ನೆನಪಿಸುವಂತಿದ್ದವು. ನಿಧಾನಕ್...