ಅಪರಿಚಿತವಾಗಿದ್ದ ಜಗವೀಗ ಚಿರಪರಿಚಿತವಾಯಿತೆಂದ ಮೇಲೆ,ಅಪರಿಚಿತರೇಕೆ ಪರಿಚಿತರಾಗಲಾರರು.....?
ಅಪರಿಚಿತವಾಗಿದ್ದ ಜಗವೀಗ ಚಿರಪರಿಚಿತವಾಯಿತೆಂದ ಮೇಲೆ,ಅಪರಿಚಿತರೇಕೆ ಪರಿಚಿತರಾಗಲಾರರು.....? ಭಾಗ#01 ಪ್ರಮೋದ್ ದಿವಟಗಿ 7259797143 ಅವತ್ತೊಂದಿನ(01 ಅಕ್ಟೋಬರ್ 2022) ಯಾವದೋ ಕೆಲ್ಸದ ಮೇಲೆ ಜಿಂದಾಲ್ ವಿದ್ಯಾನಗರ ದಿಂದ ಜೋಗ, ಕಾಕಬಾಳ, ಗುಂಡ್ಲೋದ್ದಗೆರೆ ಮಾರ್ಗವಾಗಿ ಹೋಸ್ಪೆಟೆಗೆ ಬೈಕ್ ತಗೊಂಡ್ ಹೊಂಟಿದ್ದೆ. (ಈ ಮಾರ್ಗದಲ್ಲಿ ಬೆಳಗ್ಗೆ ಹೊಸಪೇಟೆ ಬಂದ ಬಸ್ಸು, ಮತ್ತೆ ಸಂಜೆ ಅದೇ ಹೊಸಪೇಟೆಗೆ ಹೋಗುತ್ತದೆ. ಈ ಮಾರ್ಗದಲ್ಲಿ ಇರೋದೆ ಅದೊಂದು ಬಸ್ಸು, ಅದು ಕೂಡಾ ಒಂದೇ ಸಾರಿ ಬಂದು ಹೋಗುತ್ತದೆ.) ಒಬ್ಬನೇ ಬೈಕ್ ತಗೊಂಡು ಸುತ್ತಮುತ್ತಲಿರುವ ಪ್ರಕೃತಿ ಸವಿಯನ್ನ ಸವಿಯುತ್ತಾ. ಬಾಯಲ್ಲಿ ಯಾವುದಾದರೊಂದು 'old is gold' ಅನ್ನೋ ಹಳೆಯ ಹಾಡನ್ನ ಹಾಡ್ತಾ ಹೋಗುತ್ತಿರವಾಗ. ಅಲ್ಲೊಬ್ರು ಗುಡ್ಡದ ಕಡೆ ಇಂದ ನನ್ನತ್ತ ಕೈ ಮಾಡುತ್ತ "ಸವಕಾರ". "ಸವಕಾರ". ಎನ್ನುತ್ತಾ ಓಡಿ ಓಡಿ ಬರೋದು ಕಾಣಿಸುತ್ತಿತ್ತು.. ಅವರು ಬರುತ್ತಿದ್ದ ಮತ್ತು ಕೂಗುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಅನಿಸಿತ್ತು . ಡ್ರಾಪ್ ಕೆಳಲೆಂದೆ ಅಂತ ಗೊತ್ತಾಗಿ ನಾನು ಬೈಕ್ ನಿಲ್ಲಿಸಿದೆ.. ನಾನು ಯಾವಗ್ಲೆ ಬೈಕ್ ಅಲ್ಲಿ ಹೋಗ್ತಾ ಇದ್ರು ,ಯಾರೇ ಡ್ರಾಪ್ ಕೇಳಿದ್ರು.. ಎಸ್ಟೇ ಅವಸರ ಇದ್ರು ನಿಲ್ಲಿಸಿ ಡ್ರಾಪ್ ಕೇಳಿದವರನ್ನ ಕರ್ಕೊಂಡ್ ಹೋಗ್ತೀನಿ, ಮತ್ತೆ ನೀವು ಹಾಗೆ ಮಾಡಿ ಅಂತ ವಿನಂತಿಸಿಕೊಳ್ಳತಿನಿ.. ಯಾ...