ಅಪರಿಚಿತವಾಗಿದ್ದ ಜಗವೀಗ ಚಿರಪರಿಚಿತವಾಯಿತೆಂದ ಮೇಲೆ,ಅಪರಿಚಿತರೇಕೆ ಪರಿಚಿತರಾಗಲಾರರು.....?
ಅಪರಿಚಿತವಾಗಿದ್ದ ಜಗವೀಗ ಚಿರಪರಿಚಿತವಾಯಿತೆಂದ ಮೇಲೆ,ಅಪರಿಚಿತರೇಕೆ ಪರಿಚಿತರಾಗಲಾರರು.....?
ಭಾಗ#01
ಪ್ರಮೋದ್ ದಿವಟಗಿ
7259797143
ಅವತ್ತೊಂದಿನ(01 ಅಕ್ಟೋಬರ್ 2022) ಯಾವದೋ ಕೆಲ್ಸದ ಮೇಲೆ ಜಿಂದಾಲ್ ವಿದ್ಯಾನಗರ ದಿಂದ ಜೋಗ, ಕಾಕಬಾಳ, ಗುಂಡ್ಲೋದ್ದಗೆರೆ ಮಾರ್ಗವಾಗಿ ಹೋಸ್ಪೆಟೆಗೆ ಬೈಕ್ ತಗೊಂಡ್ ಹೊಂಟಿದ್ದೆ.
(ಈ ಮಾರ್ಗದಲ್ಲಿ ಬೆಳಗ್ಗೆ ಹೊಸಪೇಟೆ ಬಂದ ಬಸ್ಸು, ಮತ್ತೆ ಸಂಜೆ ಅದೇ ಹೊಸಪೇಟೆಗೆ ಹೋಗುತ್ತದೆ.
ಈ ಮಾರ್ಗದಲ್ಲಿ ಇರೋದೆ ಅದೊಂದು ಬಸ್ಸು, ಅದು ಕೂಡಾ ಒಂದೇ ಸಾರಿ ಬಂದು ಹೋಗುತ್ತದೆ.)
ಒಬ್ಬನೇ ಬೈಕ್ ತಗೊಂಡು ಸುತ್ತಮುತ್ತಲಿರುವ ಪ್ರಕೃತಿ ಸವಿಯನ್ನ ಸವಿಯುತ್ತಾ. ಬಾಯಲ್ಲಿ ಯಾವುದಾದರೊಂದು 'old is gold' ಅನ್ನೋ ಹಳೆಯ ಹಾಡನ್ನ ಹಾಡ್ತಾ ಹೋಗುತ್ತಿರವಾಗ.
ಅಲ್ಲೊಬ್ರು ಗುಡ್ಡದ ಕಡೆ ಇಂದ ನನ್ನತ್ತ ಕೈ ಮಾಡುತ್ತ "ಸವಕಾರ". "ಸವಕಾರ". ಎನ್ನುತ್ತಾ ಓಡಿ ಓಡಿ ಬರೋದು ಕಾಣಿಸುತ್ತಿತ್ತು.. ಅವರು ಬರುತ್ತಿದ್ದ ಮತ್ತು ಕೂಗುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಅನಿಸಿತ್ತು .
ಡ್ರಾಪ್ ಕೆಳಲೆಂದೆ ಅಂತ ಗೊತ್ತಾಗಿ ನಾನು ಬೈಕ್ ನಿಲ್ಲಿಸಿದೆ.. ನಾನು ಯಾವಗ್ಲೆ ಬೈಕ್ ಅಲ್ಲಿ ಹೋಗ್ತಾ ಇದ್ರು ,ಯಾರೇ ಡ್ರಾಪ್ ಕೇಳಿದ್ರು.. ಎಸ್ಟೇ ಅವಸರ ಇದ್ರು ನಿಲ್ಲಿಸಿ ಡ್ರಾಪ್ ಕೇಳಿದವರನ್ನ ಕರ್ಕೊಂಡ್ ಹೋಗ್ತೀನಿ, ಮತ್ತೆ ನೀವು ಹಾಗೆ ಮಾಡಿ ಅಂತ ವಿನಂತಿಸಿಕೊಳ್ಳತಿನಿ.. ಯಾಕಂದ್ರೆ, ನಾನು ನಮ್ ತಮ್ಮ ಪ್ರದೀಪ ಸನ್ನೋರಿದ್ದಾಗ ,ಹೊಲಕ್ಕೆ ಹೋಗಬೇಕಾದರೆ ಪ್ರತಿ ಸಾರಿ ಬೈಕ್ ಅಲ್ಲಿ ಡ್ರಾಪ್ ಕೆಳತಿದ್ವಿ.. ಭಾಳ ಮಂದಿ ನಿಲ್ಲಿಸ್ತಿರ್ಲಿಲ್ಲ.. ಆವಾಗ ನನಗ ಮತ್ತ ನಮ್ ತಮ್ಮಗ ಆಗೋ ತಳಮಳ.. ಅಸಹಾಯಕತೆ, ಬೇಜಾರಿನ ಮನಸ್ಥಿತಿಯನ್ನು. ನಾವ್ ಯಾವತ್ತೂ ಮರೆಯಲ್ಲ.. ಮತ್ತೆ ಈಗ ಯಾರೇ ಲಿಫ್ಟ್ ಕೇಳಿದ್ರು ನಾವು ಕರ್ಕೊಂಡ್ ಹೋಗದೆ ಇರಲ್ಲ.. ಲಿಫ್ಟ್ ಅಷ್ಟೇ ಅಲ್ಲದೆ.. ಹಿಂದೆ ಕುಂತ ಅಪರಿಚಿತ ವ್ಯಕ್ತಿ ಜೊತೆ ಊರು,ಹೆಸ್ರು ಪರಿಚಯ.. ಯೋಗಕ್ಷೇಮ..ಕೆಲ್ಸಾ .. ಅನು-ತನು ಎಲ್ಲ ಕೇಳಿ.. ನಂದು ಹೇಳೆ ಕೈ ಬಿಡೋ ಹವ್ಯಾಸ ನಂದು... ಅದ್ಯಾಕೋ ಗೊತ್ತಿಲ್ಲ.. ಗೊತ್ತಿಲ್ಲದವರನ್ನ ಪರಿಚಯ ಮಾಡ್ಕೊಂಡು ಅವರೊಂದಿಗೆ ನಗ್ತಾ ನಗ್ತಾ ಮಾತಾಡ್ತಾ.. ನಾವು ಹೋಗೋ ದಾರಿಯಲ್ಲೆ ಜೀವನದ ದಾರಿಯಬಗ್ಗೆ ಮಾತಾಡೋಕೆ ಅದೇನೋ ಕುಷಿ ನನಗೆ..
ಅವರನ್ನ ಬಿಟ್ಟು ಹೋಗೋವಾಗ.. ಅವರ ಮುಖದ ಮೇಲೆ ಬರೋ ಕೃತಜ್ಞತಾ ಭಾವ ಇದೆಯಲ್ಲ.. ಅದಕ್ಕಿಂತ ಹಿತ ಬೇರೊಂದಿಲ್ಲ.
ಹಿಂಗೆ ಓಡೋಡಿ ಬಂದ ವ್ಯಕ್ತಿಯೊಬ್ಬನ ಮುಖದ ತುಂಬಾ, ನೋವು , ಆತಂಕ, ಕೌತುಕ, ದುಃಖ,, ದುಮ್ಮಾನ,ದುಗುಡ, ನಿರಾಯಾಸ, ಸಂಕಟ, ಗಾಬರಿ, ಕುತೂಹಲ, ಕಳವಳ, ಅವಸರ, ಆತುರ ಇದೆಲ್ಲಕ್ಕಿಂತ ಹೆಚ್ಚಾಗೆ ಮುಗ್ಧತೆ.
Comments
Post a Comment